https://bidar.nic.in/%e0%b2%b8%e0%b2%82%e0%b2%b8%e0%b3%8d%e0%b2%a5%e0%b3%86-%e0%b2%a8%e0%b2%95%e0%b2%be%e0%b2%b6%e0%b3%86/ ( ಲಿಂಕ್)
2.https://youtu.be/FBv0JgtN_Fc
( ನಾನು ಸ್ವತಃ ತಯಾರಿಸಿದ ವಿಡಿಯೋ ಲಿಂಕ)
ಬುದ್ಧನು 'ಬೌದ್ಧ ಧರ್ಮದ ಸ್ಥಾಪಕ' ಎನ್ನುವುದು ಜನಜನಿತವಾಗಿರುವ ಸಂಗತಿಯಾದರೂ ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು
ಪಾಲಿ ಭಾಷೆಯಲ್ಲಿ "
ಧಮ್ಮ" ಎಂದು ಕರೆದನು. ತಾನು ಬೊಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ
ಮುಕ್ತರಾಗಬಹುದು ಮತ್ತು ತನ್ನಂತೆ
ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ ಈ
ಸಿದ್ಧಿಗೆ ಸ್ವಂತ ಪ್ರಯತ್ನ,
ಸಾಧನೆ ಮಾತ್ರ ಕಾರಣ ಎಂದು ಹೇಳಿದ. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನೂ ಬೇಕಾದರೂ ಬುದ್ಧನೆಂದು ಕರೆಯಬಹುದು. ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವನು ತನ್ನ
ಶಿಷ್ಯರಿಗೆ ಸೂಚಿಸಿದ. ಬುದ್ಧನ ಮೊದಲ ಶಿಷ್ಯ ಆನಂದ. ಬುದ್ಧ ಎಂದರೆ
ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. "ಆಸೆಯೇ ದುಃಖಕ್ಕೆ ಮೂಲ" ಎಂಬುದು ಅವನ ಪ್ರಸಿದ್ಧ ತತ್ವ.
3.
ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಪ್ರಮುಖ ಸ್ಥಳಗಳ ಪೈಕಿ ಒಂದಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬೀದರ್ ನಗರದಲ್ಲಿ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದೆ.
ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಈ ಸಂದರ್ಭದಲ್ಲಿ ಇವರ ಸಾಮ್ರಾಜ್ಯದಲ್ಲಿ ಬೀದರ್, ಗೋಲ್ಕೊಂಡಾ, ಬಿಜಾಪುರ, ಗುಲ್ಬರ್ಗ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿಕೊಂಡಿದ್ದವು ಎಂಬುದನ್ನು ಗಮನಿಸಬಹುದು. ಪ್ರಸ್ತುತ ಬೀದರ್ ಕೋಟೆಯ ಇತಿಹಾಸವನ್ನು ಅಲ್ ಆ ಉದ್ ದಿನ್ ಬಹಮನ್ ಶಾ ನ ಮೂಲಕ ತಿಳಿಯಬಹುದಾಗಿದೆ. ಈತ ಬಹಮನಿ ಸುಲ್ತಾನರ ಮೊದಲ ರಾಜನಾಗಿದ್ದನು ಹಾಗೂ ತನ್ನ ರಾಜಧಾನಿಯನ್ನು ಗುಲ್ಬರ್ಗ (ಕಲಬುರಗಿ) ದಿಂದ ಬೀದರ್ ಗೆ ಸ್ಥಳಾಂತರಿಸಿದ್ದನು.
ಬಹಮನಿ ಸುಲ್ತಾನರ ಸಾಮ್ರಾಜ್ಯವು ಸ್ಥಾಪಿತವಾದ ನಂತರ ಆ ಸಮಯದಲ್ಲಿ ಅಂದರೆ 14 ನೇಯ ಶತಮಾನದಲ್ಲಿ ಈ ಭಾಗಗಳಲ್ಲಿ ನಿರ್ಮಿತವಾದ ರಚನೆಗಳಲ್ಲಿ ಪರ್ಷಿಯನ್ ಸಂಸ್ಕೃತಿಯ ಪ್ರಭಾವವಿರುವುದನ್ನು ಗಮನಾರ್ಹವಾಗಿ ಕಾಣಬಹುದು. ಅಂತೆಯೆ ಬೀದರ್ ಕೋಟೆಯಲ್ಲೂ ಸಹ ಪರ್ಷಿಯನ್ ಛಾಯೆಯನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಪ್ರಸ್ಥ ಭೂಮಿಯ ಒಂದು ಕೊನೆಯಲ್ಲಿ ನಿರ್ಮಾಣಗೊಂಡ ಬೀದರ್ ಕೋಟೆಯು ಸ್ಪಷ್ಟವಾಗಿರದ ಚತುರ್ಭುಜಾಕೃತಿಯಲ್ಲಿದೆ. ಕೋಟೆ ಸಂಕೀರ್ಣವು 1.20 ಕಿ.ಮೀ ಉದ್ದ ಹೊಂದಿದ್ದರೆ ಅಗಲವು ಸುಮಾರು 0.80 ಕಿ.ಮೀ ಗಳಷ್ಟಿದೆ.
ಮಧ್ಯಕಾಲೀನ ಡೆಕ್ಕನ್ ರಾಜಧಾನಿಯಾಗಿರುವ ಪರ್ವತ ಪಟ್ಟಣವು 98 ಸ್ಮಾರಕಗಳನ್ನು ಹೊಂದಿದೆ, ಇದರಲ್ಲಿ ನಾಲ್ಕು ರಾಷ್ಟ್ರೀಯ ಸ್ಮಾರಕಗಳನ್ನು ಭಾರತದ ಪುರಾತತ್ತ್ವ ಶಾಸ್ತ್ರ ಸಮೀಕ್ಷೆ ಮತ್ತು 14 ರಾಜ್ಯ ಪುರಾತತ್ತ್ವ ಶಾಸ್ತ್ರ ಇಲಾಖೆಯಿಂದ ರಕ್ಷಿಸಲಾಗಿದೆ. ಬೀದರ್ ನಗರವು 2014 ರ ವಿಶ್ವ ಸ್ಮಾರಕಗಳ ನೋಟ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
4.
- ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯಭಾಗದಲ್ಲಿ ಎದ್ದ ವೀರಶೈವ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ[೪], ಚನ್ನಬಸವ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ ಇವರು ಸುಪ್ರಸಿದ್ಧ ವಚನಕಾರರು. ಈ ಕಾಲದ ವಚನ ಸಂಖ್ಯೆ ಹಲವು ಸಾವಿರ, ಹಲವು ಲಕ್ಷ, ಕೋಟಿ ಎಂಬ ಹೇಳಿಕೆಗಳಿವೆ.
- ಕನ್ನಡಭಾಷೆಯ ಅಭಿವ್ಯಕ್ತಿ ಸಾಧ್ಯತೆಯನ್ನು ತಳಮಟ್ಟ ಕೈವಶ ಮಾಡಿಕೊಂಡ ವಚನಕಾರರು ಆ ಸಾಧ್ಯತೆಯನ್ನು ಇನ್ನೂ ಹಿಗ್ಗಿಸಿದರು. ಅನುಭವ ಅಭಿವ್ಯಕ್ತಿಗಳಲ್ಲಿ ಪ್ರಾಮಾಣಿಕತೆಯನ್ನು ಸಾಧ್ಯ ಮಾಡಿ ತೋರಿಸಿದರು. ಈ ಆಂದೋಲನದ ಅಧಿನಾಯಕ ಬಸವಣ್ಣ. ಕಾರ್ಯಚಟುವಟಿಕೆಗಳ ಕೇಂದ್ರ ಸ್ಥಳ ಕಲ್ಯಾಣ.
- ಅಂದಿನ ಅನುಭವಮಂಟಪದ ಅಧ್ಯಕ್ಷನಾಗಿ ಮೆರೆದವನೆಂದರೆ ಅಲ್ಲಮಪ್ರಭು. ಈತ ಹಿರಿಯ ಆತ್ಮಜ್ಞಾನಿ. ನಿಜವಾದ ವೈರಾಗ್ಯವನ್ನು ಪಡೆದವ. ತನಗಿಂತ ಕಿರಿಯರಾದ ಅಕ್ಕಮಹಾದೇವಿ. ಬಸವಣ್ಣ, ಸಿದ್ಧರಾಮ ಮೊದಲಾದವರ ಧ್ಯೇಯ ಧೋರಣೆ ಗಳಲ್ಲಿನ ಇತಿಮಿತಿಗಳನ್ನು ಎತ್ತಿ ತೋರಿಸಿ ಅವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ದು ಹಿರಿಯ.
5.
ನಾನು ೨೦೧೮ ಸೆಪ್ಟೆಂಬರ್ ನಲ್ಲಿ
T.T.M.S {M.R.P} Training ಗೆ ಹೋದಾಗ
ಒನಕೆ ಓಬವ್ವಳ ಕಿಂಡಿಯನ್ನು ವೀಕ್ಷಿಸಿದ ಚಿತ್ರಪಟ)
ಒನಕೆ ಓಬವ್ವ 19ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಛಲವಾದಿ ಸಮುದಾಯದ ಕಹಳೆ ಮದ್ದಹನುಮಪ್ಪನ ಹೆಂಡತಿ, ಹೈದರಾಲಿಯು ಚಿತ್ರದುರ್ಗದ ಮೇಲೆ ಹಠಾತ್ತಾಗಿ ಆಕ್ರಮಣ ಮಾಡಿದಾಗ ಈಕೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿ ಎದುರಾಳಿಯ ಕತ್ತಿಗೆ ಬಲಿಯಾದಳು. ಒನಕೆ ಓಬವ್ವಳ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಆಕೆಯನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬಳೆಂದು ಪರಿಗಣಿಸಲಾಗಿದೆ.
6.
ಚೀನಾದ 2,200 ವರ್ಷಗಳ ಇತಿಹಾಸವನ್ನು ಸಾರುವ ಚೀನಾ ಮಹಾಗೋಡೆ ವಿಶ್ವದಲ್ಲೇ ಮನುಷ್ಯ ನಿರ್ಮಿತ ಮಹಾ ರಚನೆ ಎಂದೇ ಗುರುತಿಸಿಕೊಂಡಿದೆ. ಇದರ ಉದ್ದವನ್ನು 8,851.8ಕಿ.ಮೀ ಎಂದು ಮಾಪನ ಮಾಡಲಾಗಿದ್ದರೂ ಹೊಸ ಅಧ್ಯಯನ ಮಾತ್ರ ಈ ವಿಚಾರದಲ್ಲಿ ವಿಸ್ಮಯವನ್ನು ತೆರೆದಿಟ್ಟಿದೆ. ಚೀನಾ ಮಹಾಗೋಡೆಯ ಉದ್ದ ವಾಸ್ತವದಲ್ಲಿ ಮಾಪನ ಮಾಡಿರುವುದಕ್ಕಿಂತ 2.4 ಪಟ್ಟು ಹೆಚ್ಚು ಉದ್ದವಿದೆ ಎಂದು ಹೊಸ ಅಧ್ಯಯನ ಪತ್ತೆ ಮಾಡಿದೆ.
7.
ಶಿವಾಜಿ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ವಿಚಲಿತನಾಗುತ್ತಿರಲಿಲ್ಲ, ನಿರ್ಭೀತನಾಗಿರುತ್ತಿದ್ದ. ತೆಗೆದುಕೊಂಡ ನಿರ್ಧಾರಗಳಲ್ಲಿ ಅಳುಕಾಗಲಿ, ಅಸ್ಪಷ್ಟತೆಯಾಗಲಿ ಇವುಗಳಿಗೆ ಸ್ಥಾನವೇ ಇರುತ್ತಿರಲಿಲ್ಲ. ಇದಕ್ಕೆ ಸುಮಾರು ೩೦ ಸಾವಿರ ಸೈನ್ಯ ಬಲದೊಂದಿಗೆ ಸ್ವರಾಜ್ಯವನ್ನು ಮುಗಿಸಲು ಬಿಜಾಪುರ ಸುಲ್ತಾನನ ಆದೇಶದಂತೆ ದಂಡೆತ್ತಿ ಬಂದಿದ್ದ ಅಫ್ಜಲ್ ಖಾನನನ್ನು ಶಿವಾಜಿ ಎದುರಿಸಿದ ರೀತಿಯೇ ಸಾಕ್ಷಿ. ಈ ಘಟನೆಯನ್ನು ಆಧುನಿಕ ಯುದ್ಧ ನೀತಿಯಲ್ಲೂ War Psychology ವಿಷಯದಲ್ಲಿ ಒಂದು ಪಠ್ಯಕ್ರಮವಾಗಿ ಉಲ್ಲೇಖಿಸಲಾಗಿದೆ. ಶಿವಾಜಿ ಎಲ್ಲಾ ಸಂಭವನೀಯತೆಗಳನ್ನು ಊಹಿಸಿ, ಅದಕ್ಕೆ ಪೂರ್ವ ತಯಾರಿ ಮಾಡಿ ಅಫ್ಜಲ ಖಾನ ಜೊತೆಗೆ ಸಂಧಿಗೆ ಅವನ ಬಿಡಾರಕ್ಕೇ ಹೊರಡುತ್ತಾನೆ. ಮೊದಲೇ ಅಹಂಕಾರಿಯಾದ ಅಫ್ಜಲ ಖಾನ ಮುಂದೆ ಶಿವಾಜಿ ತಾನು ಹೆದರಿದಂತೆ ನಾಟಕವಾಡಿ ಅಫ್ಜಲ ಖಾನ ಮಾನಸಿಕವಾಗಿ ಸಡಿಲಗಒಳ್ಳುವಂತೆ ಮಾಡುತ್ತಾನೆ. ಅದೇ ಸಮಯದಲ್ಲಿ ಬಿಡಾರದ ಸುತ್ತ ತನ್ನ ಸೈನ್ಯದ ವ್ಯೂಹ ರಚನೆ ಮಾಡಿ ಅಫ್ಜಲ ಖಾನ ಬಿಡಾರವನ್ನು ಶಿವಾಜಿ ತನ್ನ ರಕ್ಷಣಾ ಕವಚವನ್ನಾಗಿ ಮಾಡಿಕೊಳ್ಳುತ್ತಾನೆ. ಮುಂಚಿತವಾಗಿ ಊಹಿಸಿದಂತೆ ಭೇಟಿಯ ಸಮಯದಲ್ಲಿ ಅಫ್ಜಲ ಖಾನ ಶಿವಾಜಿಯ ಮೇಲೆ ದಾಳಿ ಮಾಡಿದಾಗ, ಶಿವಾಜಿ ಮಾರಣಾಂತಿಕ ಪ್ರತಿದಾಳಿ ನಡೆಸಿದಷ್ಟೇ ಅಲ್ಲದೆ ಯೋಜನೆಯಂತೆ ಸನ್ನದ್ಧವಾಗಿದ್ದ ಶಿವಾಜಿಯ ಸೈನ್ಯ ಕ್ಷಿಪ್ರ ದಾಳಿ ನಡೆಸಿ ಅಫ್ಜಲ ಖಾನ ಸೈನ್ಯವನ್ನು ಹಿಮ್ಮೆಟ್ಟಿಸಿತು. ಅಫ್ಜಲ ಖಾನನ ಸೈನ್ಯದ ಮೋಜಿಗಾಗಿ ಕರೆತಂದಿದ್ದ ಮಹಿಳೆಯರನ್ನು ಗೌರವವಾಗಿ ಬೀಳ್ಕೊಡುತ್ತಾನೆ ಶಿವಾಜಿ. ಹೀಗೆ ಚಿಕ್ಕ ಸೈನ್ಯದಿಂದಲೇ ಭಾರಿ ಸಂಖ್ಯೆಯ ಶತ್ರು ಸೈನ್ಯವನ್ನು ಸೋಲಿಸುವುದರಲ್ಲಿ ಶಿವಾಜಿಯ ಧೈರ್ಯ ಮತ್ತು ಕರಾರುವಾಕ್ಕಾದ ಯುದ್ಧನೀತಿ ಕಾರಣ. ಇದೇ ರೀತಿ ಕೆಲವೇ ಸೈನಿಕರ ಬಲದೊಂದಿಗೆ ಸಹಸ್ರಾರು ಸೈನಿಕರ ರಕ್ಷಣೆಯಲ್ಲಿದ್ದ ಶಾಯಿಸ್ತಾ ಖಾನ (ಈತನ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಅತಿಯಾಗಿತ್ತು) ಮೇಲೆ ದಾಳಿ ಮಾಡಿ ಸೋಲಿಸಿದ್ದು, ಔರಂಗಜೇಬನ ಬಳಿ ಹೋಗುವುದೆಂದರೆ ಮೃತ್ಯುವಿಗೆ ಆಹ್ವಾನ ಕೊಟ್ಟಂತೆ ಎಂದು ಗೊತ್ತಿದ್ದರೂ ಸ್ವರಾಜ್ಯದ ಹಿತದೃಷ್ಟಿಯಿಂದ ನಿಶ್ಶಸ್ತ್ರವಾಗಿ ಹೋಗಿ ನಾಲ್ಕು ವರ್ಷಗಳ ಬಂಧನದಲ್ಲಿದ್ದದ್ದು, ಬಂಧನದಿಂದ ತಪ್ಪಿಸಿಕೊಂಡು ಬಂದ ನಂತರ ಕ್ಷಿಪ್ರವಾಗಿ ಕಾರ್ಯಾಚರಣೆಗಿಳಿದು ಕಳೆದುಕೊಂಡ ಕೋಟೆಗಳನ್ನು ಮತ್ತೆ ಗೆದ್ದಿದ್ದು.
8.
ಸ್ವಾಮಿ ವಿವೇಕಾನಂದರು ಮತ್ತು ಇತರ ಅಂದಿನ ಯುವಕರು ಶ್ರೀ ರಾಮಕೃಷ್ಣರ ಬೋಧನೆಗಳನ್ನು ಪ್ರಪಂಚಕ್ಕೆ ಸಾರಲು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಗಳನ್ನು ಕಟ್ಟಿದರು
9.
ಭಾರತ ಎಂದ ಕೂಡಲೇ ವಿದೇಶೀಯರ ಮನದಲ್ಲಿ ಮೂಡುವುದು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ಬಣ್ಣಬಣ್ಣದ ಹಬ್ಬಗಳು, ಮನಸೆಳೆಯುವ ಮೆರವಣಿಗೆ ಇತ್ಯಾದಿ. ಪ್ರತಿ ಕಿಲೋಮೀಟರಿಗೆ ಬದಲಾಗುವ ಭಾಷೆ ಮತ್ತು ವೈವಿಧ್ಯತೆ ಅವರನ್ನು ಬೆಚ್ಚಬೆರಗಾಗಿಸುತ್ತವೆ. ಸಾವಿರಾರು ವರ್ಷಗಳಿಂದ ಭಾರತದಾದ್ಯಂತ ಸಾವಿರಾರು ಸಂಸ್ಕೃತಿ, ಲಿಪಿ ಇರುವ ಭಾಷೆ, ಲಿಪಿ ಇಲ್ಲದ ಭಾಷೆ ಜಾತಿ, ಉಪಜಾತಿಗಳ ಸಮನ್ವಯದಲ್ಲಿ ಜನರು ಬಾಳ್ವೆ ನಡೆಸುತ್ತಾ ಬಂದಿದ್ದಾರೆ.
10.
ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ, ಉಪಗ್ರಹ, ಧೂಮಕೇತು, ಸಣ್ಣ ನಕ್ಷತ್ರಾಕೃತಿಯ ಗ್ರಹ ಅದೇ ಕ್ಷುದ್ರ ಗ್ರಹ (ಎಸ್ಟೆರೊಇಡ್)ಗಳ ಸಮೂಹವನ್ನು ಸೌರವ್ಯೂಹ ಅಥವಾ ಸೌರಮಂಡಲ ಎಂದು ಕರೆಯುತ್ತಾರೆ. ಭೂಮಿಯು ಸೌರವ್ಯೂಹದ ಮೂರನೇಯ ಗ್ರಹ.
Comments
Post a Comment